ವಿದ್ಯುತ್ ಕಾಯ್ದೆ ತಿದ್ದುಪಡಿ ವಿರೋಧಿಸಿ ಹೊನ್ನಾಳಿಯಲ್ಲಿ ಸ್ವಾಭಿಮಾನಿ ಬಳಗದಿಂದ ಇಂಧನ ಸಚಿವರಿಗೆ ಮನವಿ
ಹೊನ್ನಾಳಿ: ಒಕ್ಕೂಟ ಸರ್ಕಾರ ಜಾರಿಗೆ ತರಲು ಹೊರಟಿರುವ ವಿದ್ಯುತ್ ಕಾಯ್ದೆ (2003) ತಿದ್ದುಪಡಿ ಮಸೂದೆಯು ಜನಸಾಮಾನ್ಯರ ಹಾಗೂ ರೈತರ ಹಿತಾಸಕ್ತಿಗೆ ಮಾರಕವಾಗಿದೆ ಎಂದು ಆರೋಪಿಸಿ, ಇಂದು ದಾವಣಗೆರೆ ಜಿಲ್ಲೆಯ ಹೊನ್ನಾಳಿ-ನ್ಯಾಮತಿ ತಾಲ್ಲೂಕಿನ ಸ್ವಾಭಿಮಾನಿ ಬಳಗದ ವತಿಯಿಂದ ಉಪ ವಿಭಾಗಾಧಿಕಾರಿಗಳ ಮೂಲಕ ರಾಜ್ಯದ ಇಂಧನ ಸಚಿವರಾದ ಕೆ. ಜೆ. ಜಾರ್ಜ್ ರವರಿಗೆ ಮನವಿ ಸಲ್ಲಿಸಲಾಯಿತು.
ಕಾರ್ಪೊರೇಟ್ ಹಿತಾಸಕ್ತಿ, ರೈತರಿಗೆ ಸಂಕಷ್ಟ!
ಮನವಿ ಸಲ್ಲಿಸಿದ ಬಳಿಕ ಮಾತನಾಡಿದ ಬಳಗದ ಪ್ರಮುಖರು, “ಈ ಉದ್ದೇಶಿತ ಕಾಯ್ದೆಯು ಜಾರಿಗೆ ಬಂದರೆ ವಿದ್ಯುತ್ ವಿತರಣಾ ರಂಗವು ಸಂಪೂರ್ಣವಾಗಿ ಖಾಸಗೀಕರಣಗೊಳ್ಳಲಿದ್ದು, ಅದಾನಿ, ಅಂಬಾನಿ, ಟಾಟಾದಂತಹ ದೈತ್ಯ ಕಾರ್ಪೊರೇಟ್ ಕಂಪನಿಗಳ ನಿಯಂತ್ರಣಕ್ಕೆ ಸಿಗಲಿದೆ. ನಷ್ಟದಲ್ಲಿರುವ ವಿದ್ಯುತ್ ವಿತರಣಾ ಸಂಸ್ಥೆಗಳನ್ನು (ಡಿಸ್ಕಾಂ) ತೆರಿಗೆದಾರರ ಹಣದಿಂದಲೇ ಸರಿಪಡಿಸಿ, ಯಾವುದೇ ಬಾಧ್ಯತೆಗಳಿಲ್ಲದ ‘ಕ್ಲೀನ್ ಬ್ಯಾಲೆನ್ಸ್ ಶೀಟ್’ ಮುಖಾಂತರ ಖಾಸಗಿಯವರಿಗೆ ಹಸ್ತಾಂತರಿಸಲು ಸಂಚು ರೂಪಿಸಲಾಗಿದೆ” ಎಂದು ಕಳವಳ ವ್ಯಕ್ತಪಡಿಸಿದರು.
ಉಚಿತ ವಿದ್ಯುತ್‌ಗೆ ಕುತ್ತು ತರಲಿರುವ ‘ಸ್ಮಾರ್ಟ್ ಮೀಟರ್’
“ಕಾಯ್ದೆಯ ಅನ್ವಯ ದೇಶಾದ್ಯಂತ ಕಡ್ಡಾಯವಾಗಿ ಸ್ಮಾರ್ಟ್ ಮೀಟರ್ ಅಳವಡಿಸಲು ಸಿದ್ಧತೆ ನಡೆದಿದೆ. ಇದು ಜಾರಿಯಾದರೆ ವಿದ್ಯುತ್ ವ್ಯವಸ್ಥೆಯು ಮೊಬೈಲ್‌ನಂತೆ ‘ಪ್ರಿ-ಪೇಯ್ಡ್’ (Pre-paid) ಆಗಿ ಬದಲಾಗಲಿದ್ದು, ಗ್ರಾಹಕರು ಮೊದಲು ಹಣ ಪಾವತಿಸಿ ನಂತರವೇ ವಿದ್ಯುತ್ ಬಳಸಬೇಕಾಗುತ್ತದೆ. ಇದರಿಂದಾಗಿ ರೈತರು ಸದ್ಯ ಪಡೆಯುತ್ತಿರುವ 10 HP ವರೆಗಿನ ಉಚಿತ ವಿದ್ಯುತ್ ಸೌಲಭ್ಯವು ಸಂಪೂರ್ಣವಾಗಿ ಕಸಿದುಕೊಂಡಂತಾಗುತ್ತದೆ” ಎಂದು ಅವರು ಎಚ್ಚರಿಸಿದರು.
ರಾಜ್ಯಗಳ ಅಧಿಕಾರ ಕಡಿತಕ್ಕೆ ಆಕ್ರೋಶ
ವಿದ್ಯುತ್ ಕ್ಷೇತ್ರವು ಸಂವಿಧಾನದ ಸಮವರ್ತಿ ಪಟ್ಟಿಯಲ್ಲಿದ್ದರೂ, ಒಕ್ಕೂಟ ಸರ್ಕಾರವು ರಾಜ್ಯಗಳನ್ನು ಪರಿಗಣಿಸದೆ ಏಕಪಕ್ಷೀಯವಾಗಿ ತೀರ್ಮಾನ ಕೈಗೊಂಡಿದೆ. ಇದು ರಾಜ್ಯ ಸರ್ಕಾರಗಳ ಅಧಿಕಾರ ಮತ್ತು ಆದಾಯದ ಮೂಲವನ್ನು ಕುಂಠಿತಗೊಳಿಸಲಿದೆ. ಆದ್ದರಿಂದ ರಾಜ್ಯ ಸರ್ಕಾರವು ಈ ಕಾಯ್ದೆಯ ವಿರುದ್ಧ ಕಠಿಣ ನಿಲುವು ತಳೆಯಬೇಕು ಮತ್ತು ರೈತರ ಹಾಗೂ ಬಡ ಗ್ರಾಹಕರ ಹಿತ ಕಾಯಬೇಕು ಎಂದು ಇಂಧನ ಸಚಿವರಿಗೆ ಸಲ್ಲಿಸಿದ ಮನವಿಯಲ್ಲಿ ಆಗ್ರಹಿಸಲಾಗಿದೆ.ಈ ಸಂದರ್ಭದಲ್ಲಿ ಸ್ವಾಭಿಮಾನಿ ಬಳಗದ ಪ್ರಮುಖ ಪದಾಧಿಕಾರಿಗಳು, ಚಿಂತಕರು ಉಪಸ್ಥಿತರಿದ್ದರು.

ವಿದ್ಯುತ್ ಖಾಸಗೀಕರಣ ಕಾಯ್ದೆ ತಿದ್ದುಪಡಿ
ಒಕ್ಕೂಟ ಸರ್ಕಾರವು ವಿದ್ಯುತ್ ಕಾಯ್ದೆ (2003)ಗೆ ತಿದ್ದುಪಡಿ ತರಲು ಮಸೂದೆಯನ್ನು ಮಂಡಿಸಿ, ಪರಿಶೀಲನೆಗಾಗಿ ಸಂಸದೀಯ ಸ್ಥಾಯಿ ಸಮಿತಿಗೆ ಒಪ್ಪಿಸಿದೆ. ಈ ಕಾಯ್ದೆಯು ಜಾರಿಗೆ ಬಂದರೆ ಮುಂಬರುವ ದಿನಗಳಲ್ಲಿ ಜನಸಾಮಾನ್ಯರ ಹಾಗೂ ರೈತರ ಬದುಕಿನ ಮೇಲೆ ಆಗುವ ಪ್ರಮುಖ ಬದಲಾವಣೆಗಳು ಇಲ್ಲಿವೆ:
1. ಪ್ರಮುಖ ಬದಲಾವಣೆಗಳು ಮತ್ತು ಕಾರ್ಪೊರೇಟ್ ಹೂಡಿಕೆ
-
ಖಾಸಗೀಕರಣದ ಮುನ್ನಡೆ: ವಿದ್ಯುತ್ ವಿತರಣೆ ಖಾಸಗೀಕರಣ, ಕೃಷಿ ಕಾರ್ಪೊರೇಟೀಕರಣ ಮತ್ತು ಇಲೆಕ್ಟ್ರಿಕ್ ವಾಹನಗಳ (EV) ಬಳಕೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ.
-
ದೊಡ್ಡ ಕಂಪನಿಗಳ ಹೂಡಿಕೆ: ಮುಂಬರುವ 10 ವರ್ಷಗಳಲ್ಲಿ ಅದಾನಿ, ಅಂಬಾನಿ, ಟಾಟಾ ಮತ್ತು ಜಿಂದಾಲ್‌ನಂತಹ ದೈತ್ಯ ಕಂಪನಿಗಳು ಒಟ್ಟಾಗಿ ವಿದ್ಯುತ್ ರಂಗದಲ್ಲಿ ಸುಮಾರು 4 ಲಕ್ಷ ಕೋಟಿ ರೂ. ಹೂಡಿಕೆ ಮಾಡಲು ಸನ್ನದ್ಧವಾಗಿವೆ.
-
ಲಾಭದಾಯಕ ಹಸ್ತಾಂತರ: ನಷ್ಟದಲ್ಲಿರುವ ವಿದ್ಯುತ್ ವಿತರಣಾ ಸಂಸ್ಥೆಗಳ (ಡಿಸ್ಕಾಂ) ಸಾಲ ಹಾಗೂ ನಷ್ಟವನ್ನು ಸರ್ಕಾರವೇ ತೆರಿಗೆ ಹಣದಿಂದ ಭರಿಸಿ, “ಕ್ಲೀನ್ ಬ್ಯಾಲೆನ್ಸ್ ಶೀಟ್” ಮುಖಾಂತರ ಯಾವುದೇ ಬಾಧ್ಯತೆಗಳಿಲ್ಲದೆ ಖಾಸಗಿ ಕಂಪನಿಗಳಿಗೆ ಒಪ್ಪಿಸಲು ಸಿದ್ಧತೆ ನಡೆಸಿದೆ.
2. ಗ್ರಾಹಕರು ಮತ್ತು ರೈತರ ಮೇಲಾಗುವ ಪರಿಣಾಮಗಳು
-
ಕಡ್ಡಾಯ ಸ್ಮಾರ್ಟ್ ಮೀಟರ್: ಎಲ್ಲಾ ವಿದ್ಯುತ್ ಸಂಪರ್ಕಗಳಿಗೂ ಸ್ಮಾರ್ಟ್ ಮೀಟರ್ ಕಡ್ಡಾಯವಾಗಲಿದ್ದು, ವಿದ್ಯುತ್ ವ್ಯವಸ್ಥೆಯು ಮೊಬೈಲ್ ರೀಚಾರ್ಜ್‌ನಂತೆ ‘ಪ್ರಿ-ಪೇಯ್ಡ್’ (Pre-paid) ಆಗಿ ಬದಲಾಗಲಿದೆ (ಅಂದರೆ ಮೊದಲು ದುಡ್ಡು ಪಾವತಿಸಿ, ನಂತರ ವಿದ್ಯುತ್ ಬಳಸುವುದು).
-
ಉಚಿತ ವಿದ್ಯುತ್‌ಗೆ ಬ್ರೇಕ್: ಕಡ್ಡಾಯ ಸ್ಮಾರ್ಟ್ ಮೀಟರ್‌ಗಳು ಬರುವುದರಿಂದ ರೈತರು ಪಡೆಯುತ್ತಿರುವ 10 HP ವರೆಗಿನ ಉಚಿತ ವಿದ್ಯುತ್ ಸೌಲಭ್ಯ ಇಲ್ಲದಾಗುವ ಸಾಧ್ಯತೆ ಇದೆ.
-
DBT ಯೋಜನೆ: ಸಬ್ಸಿಡಿಗಳನ್ನು ನೇರವಾಗಿ ನೀಡುವ ಬದಲು ಗ್ರಾಹಕರ ಖಾತೆಗೆ ನೇರ ನಗದು ವರ್ಗಾವಣೆ (DBT) ಮಾಡುವ ವ್ಯವಸ್ಥೆ ಬರಲಿದೆ.
-
ದರ ವ್ಯತ್ಯಾಸ (Time-of-the-Day Tariff): ದಿನದ ಬೇರೆ ಬೇರೆ ಸಮಯದಲ್ಲಿ (Peak hours) ವಿದ್ಯುತ್ ಬಳಕೆಗೆ ತಕ್ಕಂತೆ ಪ್ರತ್ಯೇಕ ಮತ್ತು ಹೆಚ್ಚಿನ ದರವನ್ನು ನಿಗದಿಪಡಿಸುವ ತಂತ್ರಜ್ಞಾನ ಜಾರಿಗೆ ಬರಲಿದೆ.
3. ಇಲೆಕ್ಟ್ರಿಕ್ ವಾಹನ (EV) ಯುಗದ ಲಿಂಕ್
-
2030ರ ಗುರಿ: 2030ರ ವೇಳೆಗೆ ದೇಶದಲ್ಲಿ ಗರಿಷ್ಠ ಮಟ್ಟದಲ್ಲಿ ಇಲೆಕ್ಟ್ರಿಕ್ ವಾಹನಗಳಿರಬೇಕು ಹಾಗೂ ಚಾರ್ಜಿಂಗ್ ಪಾಯಿಂಟ್‌ಗಳು ಮತ್ತು ಬ್ಯಾಟರಿ ಉದ್ಯಮದ ಸಂಪೂರ್ಣ ನಿಯಂತ್ರಣ ಖಾಸಗಿ ಕಂಪನಿಗಳ ಕೈಗೆ ಸಿಗಲಿದೆ. ತೈಲ ಕಂಪನಿಗಳ ಜಾಗವನ್ನು ಈ ವಿದ್ಯುತ್ ಕಂಪನಿಗಳು ಆಕ್ರಮಿಸಿಕೊಳ್ಳಲಿವೆ.
4. ಒಕ್ಕೂಟ ವ್ಯವಸ್ಥೆ ಮತ್ತು ರಾಜ್ಯಗಳ ಅಧಿಕಾರ
-
ರಾಜ್ಯಗಳ ಅಧಿಕಾರ ಕಡಿತ: ವಿದ್ಯುತ್ ಸಂವಿಧಾನದ ಸಮವರ್ತಿ (Joint) ಪಟ್ಟಿಯಲ್ಲಿದ್ದರೂ, ಒಕ್ಕೂಟ ಸರ್ಕಾರವು ಏಕಪಕ್ಷೀಯವಾಗಿ ತೀರ್ಮಾನ ತೆಗೆದುಕೊಂಡಿರುವುದರಿಂದ ರಾಜ್ಯ ಸರ್ಕಾರಗಳ ಅಧಿಕಾರ ವ್ಯಾಪ್ತಿ ಮತ್ತು ಆದಾಯದ ಮೂಲಗಳು ಕುಂಠಿತಗೊಳ್ಳಲಿವೆ.
ಒಕ್ಕೂಟ ಸರ್ಕಾರವು ವಿದ್ಯುತ್ ಕಾಯ್ದೆ(2003)ಗೆ ತಿದ್ದುಪಡಿಯನ್ನು ಇಟ್ಟು ಮುಂಡಿಟ್ಟಿದೆ ಮತ್ತು ವಿಸ್ತೃತ ಚರ್ಚೆಗಾಗಿ ಸಂಬಂಧಿತ ಸಂಸದೀಯ ಸ್ಥಾಯಿ ಸಮಿತಿಗೆ ಹಸ್ತಾಂತರಿಸಿದೆ.
ಈ ಉದ್ದೇಶಿತ ತಿದ್ದುಪಡಿಯನ್ನು ಜನಸಾಮಾನ್ಯರು ಹೇಗೆ ನೋಡಬೇಕು?
2020-2030ರ ನಡುವೆ ದೇಶದಲ್ಲಿ ಮೂಲಸೌಕರ್ಯ ರಂಗಗಳಲ್ಲಿ ಮಾಡಲಿಚ್ಛಿಸುವ ಕೆಲವು ಬದಲಾವಣೆಗಳನ್ನು ಒಟ್ಟಾಗಿ ನೋಡಿದರೆ, ಈಗ ಸಂಸತ್ತು ಮಂಡಿಸಹೊರಟಿರುವ ಈ ವಿದ್ಯುತ್ ಕಾಯ್ದೆ ತಿದ್ದುಪಡಿಯ ಆಗಾಧತೆ ಗಮನಕ್ಕೆ ಬಂದೀತು.
-
ವಿದ್ಯುತ್ ವಿತರಣೆ ಖಾಸಗೀಕರಣ
-
ಕೃಷಿ ಕಾರ್ಪೊರೇಟೀಕರಣ
-
ಇಲೆಕ್ಟ್ರಿಕ್ ವಾಹನಗಳು
ಈ ಮೂರೂ ಅಂಶಗಳಿಗೆ ದೇಶದ ದೊಡ್ಡ ಕಂಪೆನಿಗಳು (ಅದರಲ್ಲೂ ಅಂಬಾನಿಗೆ ಹತ್ತಿರ ಇರುವ “ಆನಿ” ಕಂಪೆನಿಗಳು) ಮುಂದಿನ ಹತ್ತು ವರ್ಷಗಳಲ್ಲಿ ಎಷ್ಟು ಹೂಡಿಕೆ ಮಾಡಲು ಸನ್ನದ್ಧಗೊಂಡಿವೆ ಎಂಬುದನ್ನು ಗಮನಿಸಿದರೆ, ನಿಮಗೊಂದು ಕುತೂಹಲಕರವಾದ ಚುಕ್ಕಿ ಜೋಡಿಸುವ ಆಟ ಸಿಗುತ್ತದೆ. ಕಳೆದ 70 ವರ್ಷಗಳಲ್ಲಿ, ಖಾಸಗಿ ಕಂಪೆನಿಗಳು ಪ್ರೊಫಿಟೇಬಲ್ ಆಗಿರು ದೇಶದ ಬಾಗಿಲು ಕಾಯುತ್ತಿದ್ದವು. ಈಗ ಸ್ವತಃ ಸರ್ಕಾರವೇ ಖಾಸಗಿ ಕಂಪೆನಿಗಳಿಗೆ ಪ್ರಮೋಟರ್ ಆಗಿ ನಿಂತಿದೆ ಎಂಬುದು ಈಗ ಎಲ್ಲರಿಗೂ ಗೊತ್ತಿರುವ ಸಂಗತಿ.
ವಿದ್ಯುತ್ ರಂಗದ ಖಾಸಗೀಕರಣದ ಪ್ರಸ್ತಾಪ ಹೊಸ ಬೆಳವಣಿಗೆ ಅಲ್ಲ. 2014ರಲ್ಲೇ ಒಕ್ಕೂಟ ಸರ್ಕಾರದ ಈ ಬಗ್ಗೆ ಖಚಿತ ನಿಲುವು ತಳೆದಿತ್ತು. ಕೃಷಿ ಕಾಯ್ದೆಗಳ ರೀತಿಯಲ್ಲೇ ಈ ಕಾಯ್ದೆಗೂ ತಳಹದಿ ಹೇಗೆ ತಯಾರಾಗಬೇಕು ಎಂಬುದು ನಿರ್ಧಾರ ಆಗಿತ್ತು. ನೀತಿ ಆಯೋಗವು 2018ರಲ್ಲಿ ಪ್ರಕಟಿಸಿದ ‘ಸ್ಟ್ರಾಟೆಜಿ ಫಾರ್ ನ್ಯೂ ಇಂಡಿಯಾ @ 75’ ಪುಸ್ತಕದಲ್ಲಿ ಈ ಕುರಿತು ಸ್ಪಷ್ಟವಾಗಿ ವಿವರಿಸಲಾಗಿದೆ. ನೀತಿ ಆಯೋಗ ಸೂಚಿಸಿದ ಈ ಹಾದಿಯಲ್ಲೇ ಮುಂದುವರಿದು, ಈಗ ಮಸೂದೆ ಸಂಸತ್ತಿನಲ್ಲಿ ಮಂಡನೆ ಆಗಿದೆ.
ರಾಜ್ಯಗಳ ವಿದ್ಯುತ್ ವಿತರಣಾ ವ್ಯವಸ್ಥೆಯನ್ನು ಖಾಸಗೀಕರಣದ ಅಥವಾ ಫ್ರಾಂಚೈಸಿ ಮಾಡೆಲ್ ತರುವ ಮೂಲಕ AT&C ನಷ್ಟ (aggregate technical and commercial loss) ಕಡಿಮೆ ಮಾಡಿಕೊಳ್ಳುವುದು.
ಡಿಸ್ಕಾಂಗಳು ಗ್ರಾಮೀಣ ಪ್ರದೇಶದಲ್ಲಿ ರಿಟೇಲ್ ವಿದ್ಯುತ್ ವ್ಯಾಪಾರಕ್ಕೆ ಒಲಿದು ಮಾರ್ಗದರ್ಶನವನ್ನು ಸಿದ್ಧಪಡಿಸಿಕೊಂಡು, ಫ್ರಾಂಚೈಸಿ ಮಾಡೆಲ್ ಬಳಸಿಕೊಳ್ಳಬಹುದು, ವಿತರಣೆಗೆ ವಿಕೇಂದ್ರೀಕೃತ (ಸ್ಥಳೀಯ) ಉತ್ಪಾದನಾ ಮೂಲ, ದಾಸ್ಯಾನು ವ್ಯವಸ್ಥೆಗಳನ್ನು ಬಳಸಿಕೊಳ್ಳಬಹುದು.
ನಿಯಂತ್ರಕ ಪ್ರಾಧಿಕಾರಗಳನ್ನು ಸ್ವತಂತ್ರ ಮತ್ತು ಪರಿಣಾಮಕಾರಿಗೊಳಿಸುವುದು.
ಕೃಷಿಗೆ ರಸಗೊಬ್ಬರ, ವಿದ್ಯುತ್, ಬಿತ್ತನೆ, ವಿಮೆ ಎಂಬಿತ್ಯಾದಿ ಬೇರೆ ಬೇರೆ ಸಬ್ಸಿಡಿ ಕೊಡುವ ಬದಲು ಎಲ್ಲರಿಗೂ ಇಂತಿಷ್ಟು ಎಂದು DBT (ಖಾತೆಗೆ ನೇರ ಹಣಾವಣೆ) ರೂಪದಲ್ಲಿ ಸಬ್ಸಿಡಿ ಪಾವತಿ ಮಾಡುವುದು.
ಕೃಷಿಗೆ ಸೋಲಾರ್ ಪಂಪ್‌ಸೆಟ್‌ಗಳನ್ನು ಪ್ರೋತ್ಸಾಹಿಸುವುದು ಮತ್ತು ಹೆಚ್ಚುವರಿ ವಿದ್ಯುತ್ ಅನ್ನು ಡಿಸ್ಕಾಂಗಳು ಖರೀದಿಸುವ ವ್ಯವಸ್ಥೆ ಮಾಡುವುದು.
ಮಂಡನೆ ಈಗ ಏಕೆ?
ವಿದ್ಯುತ್ ವಿತರಣೆ ಖಾಸಗೀಕರಣ ಆಗುವ ವೇಳೆ ಟೆಂಡರ್ ಹಾಕಲು ಬಂಡವಾಳರಂಗಕ್ಕೆ ಬಡ್ಡಿಯ ಶರತ್ತುಗಳು ಹೇಗಿರಬೇಕು ಎಂದು ಸೂಚಿಸಲು ಕೇಂದ್ರ ವಿದ್ಯುತ್ ಇಲಾಖೆ 2020 ಅಕ್ಟೋಬರ್‌ನಲ್ಲೇ ‘ಸ್ಟಾಂಡರ್ಡ್ ಬಿಡ್ಡಿಂಗ್ ಡಾಕ್ಯುಮೆಂಟ್’ನ ಕರಡುಪ್ರತಿ ಬಿಡುಗಡೆ ಮಾಡಿತ್ತು. ಆದರೆ, ಮಸೂದೆ ಒಂದೂವರೆ ವರ್ಷಗಳ ಬಳಿಕ, ಈಗ ಮಂಡನೆ ಆಗುತ್ತಿದೆ. ಇದು ಯಾಕೆ ಎಂದು ಗಮನಿಸಿದರೆ, ಕೆಲವು ಕುತೂಹಲಕರ ಅಂಶಗಳು ಕಾಣಿಸುತ್ತವೆ.
ರಾಜ್ಯಗಳಲ್ಲಿ ಮೊದಲೇ ನಷ್ಟದಲ್ಲಿದ್ದ ಡಿಸ್ಕಾಂಗಳು ಕೋವಿಡ್ ಕಾಲದಲ್ಲಿ ಲಾಕ್‌ಡೌನ್ ಮತ್ತು ತಗ್ಗಿದ ವಿದ್ಯುತ್ ಬೇಡಿಕೆಗಳ ಕಾರಣದಿಂದಾಗಿ ಯಾವ ಪರಿಯ ನಷ್ಟದಲ್ಲಿದ್ದವೆಂದರೆ, 2021-22ನೇ ಸಾಲಿಗೆ ಡಿಸ್ಕಾಂಗಳ ನಷ್ಟ 1.1 ಲಕ್ಷ ಕೋಟಿ ರೂ.ಗಳಿಗೆ ಏರಿತ್ತು. ಕೋವಿಡ್ ಕಾಲದಲ್ಲಿ ಒಕ್ಕೂಟ ಸರ್ಕಾರ 90,000 ಕೋಟಿ ರೂಪಾಯಿಯನ್ನು ತನ್ನ “ಕೋವಿಡ್ ಪರಿಹಾರ”ದ ಭಾಗವಾಗಿ ರಾಜ್ಯ ಸರ್ಕಾರಗಳಿಗೆ ನೀಡಿ, ವಿದ್ಯುತ್ ವಿತರಣಾ ಸಂಸ್ಥೆಗಳಿಗೆ ರಾಜ್ಯ ಸರ್ಕಾರಗಳಿಂದ ಬಾಕಿ ಉಳಿದಿರುವ ವಿದ್ಯುತ್ ಬಿಲ್ ಪಾವತಿಗಳನ್ನು ಮಾಡಲು ಹೇಳಿತ್ತು. ಆದರೂ ಬೃಹತ್ ಗಾತ್ರದ ಸಾಲ ಡಿಸ್ಕಾಂಗಳಲ್ಲಿ ಉಳಿದಿದೆ.
ಈ ಗಂಡಾಂತರದಿಂದ ಡಿಸ್ಕಾಂಗಳನ್ನು ಖಾಸಗಿಯವರಿಗೆ ಹಸ್ತಾಂತರಿಸಲು ಹೊರಟರೆ, ಅದನ್ನು ತೆಗೆದುಕೊಳ್ಳಲು ಯಾರೂ ಮುಂದೆ ಬರುವುದಿಲ್ಲ ಎಂಬ ಸರಳ ವಾಸ್ತವ ಸರ್ಕಾರಕ್ಕೆ ಗೊತ್ತಿಲ್ಲದ್ದಲ್ಲ. ಹಾಗಾಗಿ ಅವರು ತಮ್ಮ ಸ್ಟಾಂಡರ್ಡ್ ಬಿಡ್ಡಿಂಗ್ ಡಾಕ್ಯುಮೆಂಟ್‌ನಲ್ಲಿಯೇ, ಡಿಸ್ಕಾಂಗಳನ್ನು ಖಾಸಗಿ ನಿರ್ವಹಣೆಗೆ ಪಡೆಯುವ ಕಂಪೆನಿಗೆ “ಯಾವುದೇ ನಷ್ಟ/ನಿರ್ವಹಿಸಲಾಗದ ಬಾಧ್ಯತೆಗಳಿಲ್ಲದಂತೆ, ಕ್ಲೀನ್ ಬ್ಯಾಲೆನ್ಸ್ ಶೀಟ್ ಸಹಿತವಾಗಿ” ಹಸ್ತಾಂತರಿಸಲಾಗುವುದು ಎಂದು ಸ್ಪಷ್ಟವಾಗಿ ಹೇಳಿದೆ. ಅಂದರೆ, ಸರ್ಕಾರ ತನ್ನ ತೆರಿಗೆ/ಆದಾಯ ಸಂಗ್ರಹದಿಂದಲೇ ಈ ನಷ್ಟದ ಗುಂಡಿಯನ್ನು ಮುಚ್ಚಿ, ನಷ್ಟಕ್ಕೆ ಕಾರಣ ಆಗಬಲ್ಲ ಅಂಶಗಳಿದ್ದರೆ (ಸಿಬ್ಬಂದಿ, ಹಳೆ ಯಂತ್ರಗಳು ಇತ್ಯಾದಿ) ಅವನ್ನೆಲ್ಲ ಸರಿಪಡಿಸಿ, ಆರೋಗ್ಯವಂತ ಡಿಸ್ಕಾಂಗಳನ್ನೇ ಖಾಸಗಿಯವರಿಗೆ ಹಸ್ತಾಂತರಿಸಲಿದೆ. ಅಂದರೆ, ಈ ಹೊರೆಯನ್ನು ಕೂಡ ದೇಶದ ತೆರಿಗೆದಾರರೇ ಹೊರಬೇಕು
ಈ ರೀತಿ, ಮಾರುವ ಕುರಿತನ್ನು ಕೊಚ್ಚಿಹಾಕುವುದಕ್ಕೆ ಸರ್ಕಾರಕ್ಕೆ ಸಮಯ ಬೇಕಾಗಿತ್ತು. ಜೊತೆಗೆ ಕೃಷಿ ಕಾನೂನುಗಳ ವಿರುದ್ಧ ದೇಶದಲ್ಲಿ ರೈತರು ಹೋರಾಟ ನಡೆಸುತ್ತಿದ್ದಾಗ ವಿದ್ಯುತ್ ಕ್ಷೇತ್ರದ ಈ ಬೆಳವಣಿಗೆಗಳು ರೈತರ ಗಮನಕ್ಕೆ ಬಂದಿದ್ದವು ಮತ್ತು ಅವರು ಇದರ ವಿರುದ್ಧ ಧ್ವನಿ ಎತ್ತತೊಡಗಿದ್ದರು. ಹಾಗಾಗಿ ಒಕ್ಕೂಟ ಸರ್ಕಾರ, ಈ ಮಸೂದೆಯನ್ನು ಜಾರಿಗೆ ತರಲು ಸಮಯ ಕಾಯುತ್ತಿತ್ತು. ಈಗ ರೈತರ ಹೋರಾಟಗಳ ತೀವ್ರತೆ ತಣ್ಣಗಾಗಿದೆ ಹಾಗೂ ಕರ್ನಾಟಕ, ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ, ಈಶಾನ್ಯದ ರಾಜ್ಯಗಳು ಸೇರಿದಂತೆ ಸುಮಾರು 11 ಪ್ರಮುಖ ರಾಜ್ಯಗಳು ಶೀಘ್ರವೇ ಚುನಾವಣೆ ಎದುರಿಸಲಿವೆ ಮತ್ತು ಸಾರ್ವತ್ರಿಕ ಚುನಾವಣೆಗೂ ಒಂದು ಒಂದೂವರೆ ವರ್ಷ ಮಾತ್ರ ಬಾಕಿ ಇರುವುದು. ಎಲ್ಲಾ ರಾಜಕೀಯ ಪಕ್ಷಗಳೂ ಚುನಾವಣಾ ತಯಾರಿಯಲ್ಲಿ ನಿರತರಾಗಿರುವಾಗ, ಅವರ ದಿಕ್ಕು ತಪ್ಪಿಸಲು ಒಕ್ಕೂಟ ಸರ್ಕಾರಕ್ಕೆ ಇದೊಂದು ಒಳ್ಳೆಯ ಅವಕಾಶ. ಸದ್ಯದ-ಸುಖಭ್ರಷ್ಟ “ಚುನಾವಣಾ ಯಂತ್ರ” ಹೊಂದಿರುವ ಒಕ್ಕೂಟ ಸರ್ಕಾರ, ಈ ಮಸೂದೆ ಮಂಡಿಸಿ, ಸ್ಥಾಯಿ ಸಮಿತಿಗೆ ಒಪ್ಪಿಸುವ ಮೂಲಕ ಒಂದೇ ಕಲ್ಲಿನಲ್ಲಿ ಒಂದಕ್ಕಿಂತ ಹೆಚ್ಚು ಹಣ್ಣುಗಳನ್ನು ಉದುರಿಸುವ ನಿರೀಕ್ಷೆಯಲ್ಲಿದೆ. ಸರ್ಕಾರಕ್ಕೆ ಒಂದೆಡೆ ವಿದ್ಯುತ್ ಖಾಸಗೀಕರಣದ ಚರ್ಚೆ- ದರ ವಿರುದ್ಧ ಹೋರಾಟಗಳನ್ನು ಬದಿಗೊತ್ತುವ ಮೂಲಕ ವಿರೋಧ ಪಕ್ಷಗಳ ಚುನಾವಣಾ ತಯಾರಿಯ ದಿಕ್ಕು ತಪ್ಪಿಸಿದ ಲಾಭ ಸಿಕ್ಕರೆ ಇನ್ನೊಂದೆಡೆ ನಷ್ಟದಲ್ಲಿರುವ ಡಿಸ್ಕಾಂಗಳನ್ನು ಕೊಚ್ಚಿಹಾಕುವುದಕ್ಕೆ ಸಮಯಾವಕಾಶ ಸಿಗಲಿದೆ. ಜೊತೆಗೆ ಖಾಸಗಿ ಉದ್ಯಮಪತಿಗಳಿಗೂ ಸ್ಪಷ್ಟ ಸೂಚನೆ ಹೊರಟಂತಾಗಿದೆ.
ಕಾಯ್ದೆ ಬಂದಾಗ ಏನಾಗಲಿದೆ?
ಒಕ್ಕೂಟ ಸರ್ಕಾರದ ಮಂತ್ರಿವರ ಸಭೆಯು ಈ ಕಾಯ್ದೆ ಬಂದಾಗ ವಿದ್ಯುತ್ ಕಡಿತದ ಕಷ್ಟವಿರದೆ, ವಿದ್ಯುತ್ ಪೂರೈಕೆಯಲ್ಲಿ ಅನನ್ಯ ಸುಸ್ಥಿತಿ ಮತ್ತು ತೃಪ್ತಿ ಇರಲಿದೆ ಎಂಬ ಸುಖಸ್ವಪ್ನಗಳನ್ನು ನೀಡುತ್ತಿದ್ದಾರೆ. ಸ್ವತಃ ಸರ್ಕಾರದ ಮುಖ್ಯಸ್ಥರೇ ತಮ್ಮ ಸರ್ಕಾರಕ್ಕೆ “ವ್ಯವಹಾರ ನಡೆಸುವ ಯಾವುದೇ ಉದ್ದೇಶ ಇಲ್ಲ” ಎಂದು ಘೋಷಣಾ ಪೂರ್ವಕವಾಗಿ ಹೇಳಿಕೊಂಡಿದ್ದಾರೆ.
ರೈತರನ್ನು ಅಥವಾ ವಾಸ್ತವದ ಮನೆಗಳನ್ನು ತೋರಿಸಿ, ವಿದ್ಯುತ್ ಕಳ್ಳತನಗಳೇ ಮಾಮೂಲು ಎಂಬ ವಿಚಾರ ಮರೆಯುತ್ತಾರೆ. ಅದೇನಿದ್ದರೂ ದೇಶದಲ್ಲಿ ಉತ್ಪಾದನೆ ಆಗುವ ಒಟ್ಟು ವಿದ್ಯುತ್‌ನಲ್ಲಿ ಕೃಷಿ ಬಳಕೆಯ ಪಾಲು ಕೇವಲ ಶೇ. 18 ಮತ್ತು ಮನೆಬಳಕೆಯ ಪಾಲು ಕೇವಲ ಶೇ. 20. ಉಳಿದದ್ದೆಲ್ಲ ವಾಣಿಜ್ಯ, ಕೈಗಾರಿಕೆಗಳ ಬಳಕೆಯು. ಈ ಹಿನ್ನೆಲೆಯಲ್ಲಿ ಒಟ್ಟು ಬೆಳವಣಿಗೆಗಳನ್ನು ಗಮನಿಸಿದಾಗ ಮಾತ್ರ ಈ ಕಾಯ್ದೆ ಬಂದಾಗ ಯಾರಿಗೆ ಲಾಭ-ಯಾರಿಗೆ ನಷ್ಟ ಎಂಬುದು ಅರ್ಥವಾದೀತು. ಅದಕ್ಕೆ ಪೂರಕವಾಗಿ ಕೆಲವು ಮಾಹಿತಿಗಳನ್ನು ಇಲ್ಲಿ ಕೇಳಿ ಕೊಡಲಾಗಿದೆ.
ವಿದ್ಯುತ್ ಖಾಸಗೀಕರಣ ಕಾಯ್ದೆಯನ್ನು “ವಿದ್ಯುತ್ ಚಾಲಿತ ವಾಹನ”ಯುಗದಿಂದ ಪ್ರತ್ಯೇಕಿಸಿ ನೋಡಬಾರದು. 2030ರ ಹೊತ್ತಿಗೆ ದೇಶದಲ್ಲಿ ನೂರಕ್ಕೆ ನೂರರಷ್ಟು ವಿದ್ಯುತ್ ವಾಹನಗಳು ಇರಬೇಕು ಮತ್ತು 2025ರ ಬಳಕೆ ಕೇವಲ ವಿದ್ಯುತ್ ಚಾಲಿತ ವಾಹನಗಳನ್ನು ಮಾತ್ರ ಪೂರೈಸಬೇಕೆನ್ನುವ ನೀತಿ ಒಕ್ಕೂಟ ಸರ್ಕಾರದ್ದಿದೆ. ಸರ್ಕಾರ ತನ್ನ ತೆರಿಗೆ/ಆದಾಯ ಸಂಗ್ರಹದಿಂದಲೇ ಈ ನಷ್ಟದ ಗುಂಡಿಯನ್ನು ಮುಚ್ಚಿ, ನಷ್ಟಕ್ಕೆ ಕಾರಣ ಆಗಬಲ್ಲ ಅಂಶಗಳಿದ್ದರೆ (ಸಿಬ್ಬಂದಿ, ಹಳೆ ಯಂತ್ರಗಳು ಇತ್ಯಾದಿ) ಅವನ್ನೆಲ್ಲ ಸರಿಪಡಿಸಿ, ಆರೋಗ್ಯವಂತ ಡಿಸ್ಕಾಂಗಳನ್ನೇ ಖಾಸಗಿಯವರಿಗೆ ಹಸ್ತಾಂತರಿಸಲಿದೆ. ಅಂದರೆ, ಈ ಹೊರೆಯನ್ನು ಕೂಡ ದೇಶದ ತೆರಿಗೆದಾರರೇ ಹೊರಬೇಕು.
ಈ ರೀತಿ, ಮಾರುವ ಕುರಿತನ್ನು ಕೊಚ್ಚಿಹಾಕುವುದಕ್ಕೆ ಸರ್ಕಾರಕ್ಕೆ ಸಮಯ ಬೇಕಾಗಿತ್ತು. ಜೊತೆಗೆ ಕೃಷಿ ಕಾಯ್ದೆಗಳ ವಿರುದ್ಧ ದೇಶದಲ್ಲಿ ರೈತರು ಹೋರಾಟ ನಡೆಸುತ್ತಿದ್ದಾಗ ವಿದ್ಯುತ್ ಕ್ಷೇತ್ರದ ಈ ಬೆಳವಣಿಗೆಗಳು ರೈತರ ಗಮನಕ್ಕೆ ಬಂದಿದ್ದವು ಮತ್ತು ಅವರು ಇದರ ವಿರುದ್ಧ ಧ್ವನಿ ಎತ್ತತೊಡಗಿದ್ದರು. ಹಾಗಾಗಿ ಒಕ್ಕೂಟ ಸರ್ಕಾರ, ಈ ಮಸೂದೆಯನ್ನು ಜಾರಿಗೆ ತರಲು ಸಮಯ ಕಾಯುತ್ತಿತ್ತು. ಈಗ ರೈತರ ಹೋರಾಟಗಳ ತೀವ್ರತೆ ತಣ್ಣಗಾಗಿದೆ ಹಾಗೂ ಕರ್ನಾಟಕ, ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ, ಈಶಾನ್ಯದ ರಾಜ್ಯಗಳು ಸೇರಿದಂತೆ ಸುಮಾರು 11 ಪ್ರಮುಖ ರಾಜ್ಯಗಳು ಶೀಘ್ರವೇ ಚುನಾವಣೆ ಎದುರಿಸಲಿವೆ ಮತ್ತು ಸಾರ್ವತ್ರಿಕ ಚುನಾವಣೆಗೂ ಒಂದು ಒಂದೂವರೆ ವರ್ಷ ಮಾತ್ರ ಬಾಕಿ ಇರುವುದು. ಎಲ್ಲಾ ರಾಜಕೀಯ ಪಕ್ಷಗಳೂ ಚುನಾವಣಾ ತಯಾರಿಯಲ್ಲಿ ನಿರತರಾಗಿರುವಾಗ, ಅವರ ದಿಕ್ಕು ತಪ್ಪಿಸಲು ಒಕ್ಕೂಟ ಸರ್ಕಾರಕ್ಕೆ ಇದೊಂದು ಒಳ್ಳೆಯ ಅವಕಾಶ. ಸದ್ಯದ-ಸುಖಭ್ರಷ್ಟ “ಚುನಾವಣಾ ಯಂತ್ರ” ಹೊಂದಿರುವ ಒಕ್ಕೂಟ ಸರ್ಕಾರ, ಈ ಮಸೂದೆ ಮಂಡಿಸಿ, ಸ್ಥಾಯಿ ಸಮಿತಿಗೆ ಒಪ್ಪಿಸುವ ಮೂಲಕ ಒಂದೇ ಕಲ್ಲಿನಲ್ಲಿ ಒಂದಕ್ಕಿಂತ ಹೆಚ್ಚು ಹಣ್ಣುಗಳನ್ನು ಉದುರಿಸುವ ನಿರೀಕ್ಷೆಯಲ್ಲಿದೆ. ಸರ್ಕಾರಕ್ಕೆ ಒಂದೆಡೆ ವಿದ್ಯುತ್ ಖಾಸಗೀಕರಣದ ಚರ್ಚೆ- ದರ ವಿರುದ್ಧ ಹೋರಾಟಗಳನ್ನು ಬದಿಗೊತ್ತುವ ಮೂಲಕ ವಿರೋಧ ಪಕ್ಷಗಳ ಚುನಾವಣಾ ತಯಾರಿಯ ದಿಕ್ಕು ತಪ್ಪಿಸಿದ ಲಾಭ ಸಿಕ್ಕರೆ ಇನ್ನೊಂದೆಡೆ ನಷ್ಟದಲ್ಲಿರುವ ESCOMಗಳನ್ನು ಕೊಚ್ಚಿಹಾಕುವುದಕ್ಕೆ ಸಮಯಾವಕಾಶ ಸಿಗಲಿದೆ. ಜೊತೆಗೆ ಖಾಸಗಿ ಉದ್ಯಮಪತಿಗಳಿಗೂ ಸ್ಪಷ್ಟ ಸೂಚನೆ ಹೊರಟಂತಾಗಿದೆ.
ಒಕ್ಕೂಟ ಸರ್ಕಾರದ ಮಂತ್ರಿವರ ಸಭೆಯು ಈ ಕಾಯ್ದೆ ಬಂದಾಗ ವಿದ್ಯುತ್ ಕಡಿತದ ಕಷ್ಟವಿರದೆ, ವಿದ್ಯುತ್ ಪೂರೈಕೆಯಲ್ಲಿ ಅನನ್ಯ ಸುಸ್ಥಿತಿ ಮತ್ತು ತೃಪ್ತಿ ಇರಲಿದೆ ಎಂಬ ಸುಖಸ್ವಪ್ನಗಳನ್ನು ನೀಡುತ್ತಿದ್ದಾರೆ. ಸ್ವತಃ ಸರ್ಕಾರದ ಮುಖ್ಯಸ್ಥರೇ ತಮ್ಮ ಸರ್ಕಾರಕ್ಕೆ “ವ್ಯವಹಾರ ನಡೆಸುವ ಯಾವುದೇ ಉದ್ದೇಶ ಇಲ್ಲ” (Govt has no business to be in business) ಎಂದು ಘೋಷಣಾ ಪೂರ್ವಕವಾಗಿ ಹೇಳಿಕೊಂಡಿದ್ದಾರೆ.
ರೈತರನ್ನು ಅಥವಾ ವಾಸ್ತವದ ಮನೆಗಳನ್ನು ತೋರಿಸಿ, ವಿದ್ಯುತ್ ಕಳ್ಳತನಗಳೇ ಮಾಮೂಲು ಎಂಬ ವಿಚಾರ ಮರೆಯುತ್ತಾರೆ. ಅದೇನಿದ್ದರೂ ದೇಶದಲ್ಲಿ ಉತ್ಪಾದನೆ ಆಗುವ ಒಟ್ಟು ವಿದ್ಯುತ್‌ನಲ್ಲಿ ಕೃಷಿ ಬಳಕೆಯ ಪಾಲು ಕೇವಲ ಶೇ. 18 ಮತ್ತು ಮನೆಬಳಕೆಯ ಪಾಲು ಕೇವಲ ಶೇ. 20. ಉಳಿದದ್ದೆಲ್ಲ ವಾಣಿಜ್ಯ, ಕೈಗಾರಿಕೆಗಳ ಬಳಕೆಯು. ಈ ಹಿನ್ನೆಲೆಯಲ್ಲಿ ಒಟ್ಟು ಬೆಳವಣಿಗೆಗಳನ್ನು ಗಮನಿಸಿದಾಗ ಮಾತ್ರ ಈ ಕಾಯ್ದೆ ಬಂದಾಗ ಯಾರಿಗೆ ಲಾಭ-ಯಾರಿಗೆ ನಷ್ಟ ಎಂಬುದು ಅರ್ಥವಾದೀತು. ಅದಕ್ಕೆ ಪೂರಕವಾಗಿ ಕೆಲವು ಮಾಹಿತಿಗಳನ್ನು ಇಲ್ಲಿ ಕೇಳಿ ಕೊಡಲಾಗಿದೆ.
ವಿದ್ಯುತ್ ಖಾಸಗೀಕರಣ ಕಾಯ್ದೆಯನ್ನು “ವಿದ್ಯುತ್ ಚಾಲಿತ ವಾಹನ”ಯುಗದಿಂದ ಪ್ರತ್ಯೇಕಿಸಿ ನೋಡಬಾರದು. 2030ರ ಹೊತ್ತಿಗೆ ದೇಶದಲ್ಲಿ ನೂರಕ್ಕೆ ನೂರರಷ್ಟು ವಿದ್ಯುತ್ ವಾಹನಗಳು ಇರಬೇಕು ಮತ್ತು 2025ರ ಬಳಕೆ ಕೇವಲ ವಿದ್ಯುತ್ ಚಾಲಿತ ವಾಹನಗಳನ್ನು ಮಾತ್ರ ಪೂರೈಸಬೇಕೆನ್ನುವ ನೀತಿ ಒಕ್ಕೂಟ ಸರ್ಕಾರದ್ದಿದೆ. ಅದಕ್ಕೆ ಅಗತ್ಯವಿರುವ ಇಲೆಕ್ಟ್ರಿಕ್ ಚಾರ್ಜಿಂಗ್ ಪಾಯಿಂಟ್‌ಗಳು, ಬ್ಯಾಟರಿ ಉತ್ಪಾದನೆ, ಬ್ಯಾಟರಿ ಸ್ವಾಪಿಂಗ್ ನೀತಿ ಇತ್ಯಾದಿಗಳ ಬೃಹತ್ ಜಾಲ ರೂಪಿಸಿಂದಿದೆ. ಇವತ್ತು ದೇಶದ ಅತಿಹೆಚ್ಚಿನ ಆದಾಯ ತರುತ್ತಿರುವ ತೈಲ ಕಂಪೆನಿಗಳ ಜಾಗದಲ್ಲಿ 2030ರ ಹೊತ್ತಿಗೆ ವಿದ್ಯುತ್ ಕಂಪೆನಿಗಳಿರುತ್ತವೆ. ಹಾಗಾಗಿ ದೇಶದ ದೊಡ್ಡ ಕಂಪೆನಿಗಳು ಇದರಿಂದಲೇ ಅದಕ್ಕೆ ತಯಾರಿಯಲ್ಲಿ ನಿರತರಾಗಿವೆ. ನಾಳೆ ವಿದ್ಯುತ್ ರಂಗ ಖಾಸಗೀಕರಣಗೊಂಡಾಗ, ಅದರ ಅತಿದೊಡ್ಡ ಫಲಾನುಭವಿಗಳು ಇವರೇ.
ಕೃಷಿ ಕಾಯ್ದೆಗಳಿಗೆ ತೋರಿಕೆಗಷ್ಟೇ ಹಿನ್ನೆಡೆಯಾಗಿದ್ದರೂ ಸರ್ಕಾರದ ಕೃಷಿ ಸಂಬಂಧಿ ನೀತಿಗಳಲ್ಲಿ ಯಾವುದೇ ಮಹತ್ತರ ಬದಲಾವಣೆ ಆಗಿಲ್ಲ. ಹಾಗಾಗಿ ನಾಳೆ ಕೃಷಿ ರಂಗ ಕಾರ್ಪೊರೇಟೀಕರಣಗೊಂಡಾಗ, ಸರ್ಕಾರದ ಎಲ್ಲ ರೀತಿಯ ಸಬ್ಸಿಡಿ (ವಿದ್ಯುತ್ ಸಬ್ಸಿಡಿ ಸೇರಿದಂತೆ) ನಿಲ್ಲಿಸಿ ದೊಡ್ಡ ಫಲಾನುಭವಿಗಳು ಕೂಡ ಕಾರ್ಪೊರೇಟ್
ರೈತರು ಈಗ ಪಡೆಯುತ್ತಿರುವ 10 ಹೆಚ್‌ಪಿ ತನಕದ ಕೃಷಿ ವಿದ್ಯುತ್ ಪಂಪ್‌ಗಳ ಉಚಿತ ವಿದ್ಯುತ್ ಕಡ್ಡಾಯ ಸ್ಮಾರ್ಟ್ ಮೀಟರ್ ಬರುವುದರಿಂದ ಇಲ್ಲದಾಗಲಿದೆ. 2025 ಮಾರ್ಚ್ ಒಳಗೆ ಎಲ್ಲ ವಿದ್ಯುತ್ ಸಂಪರ್ಕಗಳಿಗೂ ಕಡ್ಡಾಯವಾಗಿ ಸ್ಮಾರ್ಟ್ ಮೀಟರ್ ಅಳವಡಿಸಬೇಕೆಂದು ಸರ್ಕಾರದ ನೀತಿ ಈಗಾಗಲೇ ಸೂಚಿಸಿದೆ. ಸ್ಮಾರ್ಟ್ ಮೀಟರ್ ಬಂದ ಜ್ಣ್ಞೆಗೆ ವಿದ್ಯುತ್ ‘ಪ್ರಿ-ಪೇಯ್ಡ್’ (ಮೊದಲೇ ಪಾವತಿ ಮಾಡಿ ಆ ಬಳಿಕ ಬಳಕೆ) ಆಗಲಿದೆ. ರೈತರಿಗೆ ಸೋಲಾರ್ ವಿದ್ಯುತ್ ಬಳಸಿ, ಹೆಚ್ಚಿನದ್ದನ್ನು ಖಾಸಗಿಗೆ ಮಾರುವ ಮೂಲಕ “ಕನ್ಸ್ಯೂಮರ್ ಆಗಿದ್ದವರು ಪ್ರೊಸ್ಯೂಮರ್” ಆಗಿ ಎಂದು ಸರ್ಕಾರ ರೈತರ ಮುಂಗೈಗೆ ಬೆಲ್ಲ ಹಚ್ಚಿದೆ.
ವಿದ್ಯುತ್ ಸಂವಿಧಾನದ ಸಮವರ್ತಿ ಪಟ್ಟಿಯಲ್ಲಿ ಬರುತ್ತದೆ (ಅಂದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜಂಟಿ ಪಟ್ಟಿ). ಈಗ ಈ ಮಸೂದೆಯ ಮೂಲಕ ಒಕ್ಕೂಟ ಸರ್ಕಾರ ಏಕಪಕ್ಷೀಯ ತೀರ್ಮಾನ ತಗೆದುಕೊಂಡಿದೆ ಮತ್ತು ಇದು ರಾಜ್ಯ ಸರ್ಕಾರಗಳ ಅಧಿಕಾರದ ವ್ಯಾಪ್ತಿಯನ್ನು, ಆದಾಯ ಮೂಲವನ್ನು ಮೊಟಕುಗೊಳಿಸಿದೆ. ಇನ್ನು ರಾಜ್ಯ ಸರ್ಕಾರ ಇಟ್ಟಿದ್ದ ಕೃಷಿ ಆದಾಯದ ಪಾಲಿಗಾಗಿ ಜಿಎಸ್‌ಟಿ ಮೊರೆಹೋಗುವುದು ಅನಿವಾರ್ಯವಾದಾಗ, ಆ ವೇಳೆ ಕೂಡ ದೇಶದ ಬದಲಾವಣೆಯಾಗಲಿದೆ. ಆಧುನಿಕ ಬದುಕಿನಲ್ಲಿ ಜನರ ಮೂಲಭೂತ ‘ಬದುಕು ಪದ್ಧತಿ’ಯನ್ನು ಬದಲಿಸುವ ‘ವಿದ್ಯುತ್’ ಸಂಪೂರ್ಣವಾಗಿ ಖಾಸಗಿಯವರ ಕೈಗೆ ಸಿಗುವುದು ಎಂದರೆ ಅದರ ಅರ್ಥ ಏನು? ವಿದ್ಯುತ್ ವಿತರಣೆ ಖಾಸಗಿ ಕೈಗೆ ಹೋದಾಗ, ವಿದ್ಯುತ್ ದರದ ಮೇಲೆ ಸರ್ಕಾರಕ್ಕೆ ನಿಯಂತ್ರಣ ಇರುವುದಿಲ್ಲ.
