Monday, October 5, 2026
Home ರಾಜಕೀಯಸಿಎಂ ಬದಲಾವಣೆ ವದಂತಿಗೆ ಹೈಕಮಾಂಡ್ ಬ್ರೇಕ್: ದೆಹಲಿ ಬಿಗ್ ಮೀಟಿಂಗ್‌ನಲ್ಲಿ ನಡೆದಿದ್ದೇನು?

ಸಿಎಂ ಬದಲಾವಣೆ ವದಂತಿಗೆ ಹೈಕಮಾಂಡ್ ಬ್ರೇಕ್: ದೆಹಲಿ ಬಿಗ್ ಮೀಟಿಂಗ್‌ನಲ್ಲಿ ನಡೆದಿದ್ದೇನು?

ವದಂತಿಗಳನ್ನೆಲ್ಲ ತಳ್ಳಿಹಾಕಿದ ವೇಣುಗೋಪಾಲ್ | ಹೈಕಮಾಂಡ್ ಗೇಮ್ ಪ್ಲಾನ್: ಯಾರಿಗೆ ಸಿಗಲಿದೆ ಟಿಕೆಟ್? | ಮಲ್ಲಿಕಾರ್ಜುನ ಖರ್ಗೆ ಮರುನಾಮಕರಣ | ರೇಸ್‌ನಲ್ಲಿ ಡಿ.ಕೆ. ಸುರೇಶ್ | ಸಾಮಾಜಿಕ ನ್ಯಾಯಕ್ಕೆ ಆದ್ಯತೆ

by Editor
0 comments

ಬೆಂಗಳೂರು/ದೆಹಲಿ: ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ನಾಯಕತ್ವ ಬದಲಾವಣೆಯ ವದಂತಿಗಳಿಗೆ ಕಾಂಗ್ರೆಸ್ ಹೈಕಮಾಂಡ್ ಕೊನೆಗೂ ತೆರೆ ಎಳೆದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬದಲಾವಣೆ ಕುರಿತು ಯಾವುದೇ ಚರ್ಚೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿರುವ ಹೈಕಮಾಂಡ್, ದೆಹಲಿಯಲ್ಲಿ ನಡೆದ ಉನ್ನತ ಮಟ್ಟದ ಸಭೆಯು ಕೇವಲ ಮುಂಬರುವ ಚುನಾವಣೆಗಳಿಗಷ್ಟೇ ಸೀಮಿತವಾಗಿತ್ತು ಎಂದು ತಿಳಿಸಿದೆ.

ದೆಹಲಿಯ ಕಾಂಗ್ರೆಸ್ ಪ್ರಧಾನ ಕಚೇರಿ ‘ಇಂದಿರಾ ಭವನ’ದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಸುಮಾರು ಎರಡು ಗಂಟೆಗಳ ಕಾಲ ಸುದೀರ್ಘ ಸಭೆ ನಡೆಯಿತು. ಸಭೆಯಲ್ಲಿ ರಾಹುಲ್ ಗಾಂಧಿ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್, ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಹಾಗೂ ಕೆ.ಸಿ. ವೇಣುಗೋಪಾಲ್ ಪಾಲ್ಗೊಂಡಿದ್ದರು.

ವದಂತಿಗಳನ್ನೆಲ್ಲ ತಳ್ಳಿಹಾಕಿದ ವೇಣುಗೋಪಾಲ್

ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಹಿರಿಯ ನಾಯಕ ಕೆ.ಸಿ. ವೇಣುಗೋಪಾಲ್, “ಮಾಧ್ಯಮಗಳಲ್ಲಿ ಬರುತ್ತಿರುವ ಸಿಎಂ ಬದಲಾವಣೆ ವದಂತಿಗಳಲ್ಲಿ ಯಾವುದೇ ಸತ್ಯಾಂಶವಿಲ್ಲ. ಇಂದಿನ ಸಭೆಯಲ್ಲಿ ಕೇವಲ ಮುಂಬರುವ ರಾಜ್ಯಸಭೆ ಮತ್ತು ವಿಧಾನ ಪರಿಷತ್ (MLC) ಚುನಾವಣೆಗಳ ಟಿಕೆಟ್ ಹಂಚಿಕೆ ಹಾಗೂ ಅಭ್ಯರ್ಥಿಗಳ ಆಯ್ಕೆಯ ಬಗ್ಗೆ ಮಾತ್ರ ಚರ್ಚಿಸಲಾಗಿದೆ. ಹೀಗಾಗಿ ಇಂತಹ ವದಂತಿಗಳನ್ನು ಇನ್ಮುಂದೆಯಾದರೂ ನಿಲ್ಲಿಸಬೇಕು,” ಎಂದು ಖಡಕ್ ಆಗಿ ವಿನಂತಿಸಿದರು.

ಇನ್ನು ಸಭೆ ಮುಗಿಸಿ ಹೊರಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಾಧ್ಯಮಗಳ ಯಾವುದೇ ಪ್ರಶ್ನೆಗಳಿಗೆ ಉತ್ತರಿಸದೆ ಮೌನವಾಗಿ ನಿರ್ಗಮಿಸಿದ್ದು ವಿಶೇಷವಾಗಿತ್ತು.

ಹೈಕಮಾಂಡ್ ಗೇಮ್ ಪ್ಲಾನ್: ಯಾರಿಗೆ ಸಿಗಲಿದೆ ಟಿಕೆಟ್?

ಕರ್ನಾಟಕದಿಂದ ತೆರವಾಗಲಿರುವ 4 ರಾಜ್ಯಸಭಾ ಸ್ಥಾನಗಳ ಪೈಕಿ 3 ಸ್ಥಾನಗಳನ್ನು ಗೆಲ್ಲುವ ಸಂಖ್ಯಾಬಲ ಕಾಂಗ್ರೆಸ್ ಹೊಂದಿದ್ದು, ಅಭ್ಯರ್ಥಿಗಳ ಆಯ್ಕೆ ಕುರಿತು ಸಭೆಯಲ್ಲಿ ಗಂಭೀರ ಚರ್ಚೆ ನಡೆದಿದೆ.

  • ಮಲ್ಲಿಕಾರ್ಜುನ ಖರ್ಗೆ ಮರುನಾಮಕರಣ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನೇ ಮತ್ತೊಮ್ಮೆ ಕರ್ನಾಟಕದಿಂದ ರಾಜ್ಯಸಭೆಗೆ ಕಳುಹಿಸುವುದು ಬಹುತೇಕ ಖಚಿತ ಎನ್ನಲಾಗಿದೆ.

  • ರೇಸ್‌ನಲ್ಲಿ ಡಿ.ಕೆ. ಸುರೇಶ್: ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಸಹೋದರ, ಮಾಜಿ ಸಂಸದ ಡಿ.ಕೆ. ಸುರೇಶ್ ಅವರ ಹೆಸರನ್ನು ಸಹ ಹೈಕಮಾಂಡ್ ಗಂಭೀರವಾಗಿ ಪರಿಗಣಿಸಿದೆ.

  • ಸಾಮಾಜಿಕ ನ್ಯಾಯಕ್ಕೆ ಆದ್ಯತೆ: ಉಳಿದ ಸ್ಥಾನಗಳಿಗೆ ಒಬ್ಬ ಮಹಿಳೆ ಅಥವಾ ಹಿಂದುಳಿದ ವರ್ಗದ (OBC) ನಾಯಕರಿಗೆ ಮನ್ನಣೆ ನೀಡಲು ಪಕ್ಷದ ಉನ್ನತ ಮಟ್ಟದ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

You may also like

Leave a Comment

➤    ➤ ಧರ್ಮಸ್ಥಳ ಪ್ರಕರಣ: ನ್ಯಾಯಾಲಯಕ್ಕೆ 7,000 ಪುಟಗಳ ಅಂತಿಮ ವರದಿ ಸಲ್ಲಿಸಿದ SIT   ➤ ವಿದ್ಯುತ್ ಕಾಯ್ದೆ ತಿದ್ದುಪಡಿ ವಿರೋಧಿಸಿ ಹೊನ್ನಾಳಿಯಲ್ಲಿ ಸ್ವಾಭಿಮಾನಿ ಬಳಗದಿಂದ ಇಂಧನ ಸಚಿವರಿಗೆ ಮನವಿ   ➤ ಬಿಗ್ ಬ್ರೇಕಿಂಗ್: ಕೈ ಪಾಳಯದಲ್ಲಿ ಭಿನ್ನಮತ ಸರಿಪಡಿಸಿದ ಹೈಕಮಾಂಡ್! ರಾಮಲಿಂಗಾರೆಡ್ಡಿ ರಾಜೀನಾಮೆ ನಾಟಕಕ್ಕೆ ಸುಖಾಂತ್ಯ!   ➤ ಜೂನ್ 19ರಂದು ರಾಜ್ಯಾದ್ಯಂತ ತೆರೆಗೆ ಬರುತ್ತಿರುವ ‘ದೊಡ್ಮನ್ಸ’ ಚಿತ್ರ